Tuesday, April 3, 2012


                         


ಓಡುತಿರುವುದು ಜಗವು,ಓಡುತಿರುವುದು
ಯಾರಿಗೂ ಸಿಗದಂತೆ,ಎಂದಿಗೂ ನಿಲದಂತೆ
ತನ್ನಷ್ಟಕ್ಕೆ ತಾ ತಿರು ತಿರುಗಿ

ಓಡುತಿರುವುದು ಜಗವು,ಓಡುತಿರುವುದು

ಯಾರಿಗೂ ಕಾಯದೇ,ಯಾರನು ಬಿಡದೆ
ಯಾರನು ಲೆಕ್ಕಿಸದೆ,ಎಲ್ಲರನೂ ತನ್ನ ಸೆರಗಲಿ ಹಿಡಿದು
ಹೊಗಲಿದರು ಕೇಳದೆ, ತೆಗಲಿದರು ನೋಡದೆ

ಓಡುತಿರುವುದು ಜಗವು,ಓಡುತಿರುವುದು

ನಾಳೆಯನು ಇಂದಿಗೆ ಕರೆಯುತ,ಈ ದಿನವ ನೆನಪಿಗೆ ತಳ್ಳುತ,
ಕರುಣೆಯ ಅರ್ಥವ ಅರಿಯದೆ,
ತನ್ನ ಕೆಲಸಕೆ ಹೊ೦ಚ ಹೂಡುತ 

ಓಡುತಿರುವುದು ಜಗವು,ಓಡುತಿರುವುದು
                                                       

                                                                                                     

Saturday, February 25, 2012

*** ನಿನ್ನ ನೆನಪು ***

ಕಾರಣವ ಅರಿಯದೆ ಸುಮ್ಮನೇ-
ನಿಂದಿಸುವೆ ಏಕೆ ನನ್ನನೇ
ಅರಿಯದೆ ಹೊದೆಯೆ ಮನಸಿನ ಬಾವನೆ

ಊರಿಗೆ ಬಂದಾಕೆ ನೀರಿಗೆ ಬಾರದೇ ಇರುವಳೇ
ತುಮುಲವೇಕೆ ಅಷ್ಟು, ಬರುವೆ ನಿನಗಾಗೆ
ಕಾಯಬಾರದೇ ಕೊಂಚ ನೀ

ಕನಸಕಟ್ಟಿ, ಬೆಟ್ಟದಂತೆ ಹೊತ್ತು ಆಸೆ
ಹೊರಟಿರುವೆ ನಾ, ನನ್ನವಳೇ-
ಕೊಂಚ ತಾಳು, ನನಗು ನಿನ್ನ ನೆನಪೇ

*****ಕಾಲ*****

ಕಾಲ ಕಾಲದಲಿ ಅಡಗಿ ಹೋಗಿದೆ
ಕಾಲಾಂತರಂಗದ ವಿಷಯಗಳು
ಕಾಡಿ-ಬೇಡಿದರು ತಿಳಿಯದು ಸುಲಭದಿ
ಕಂಡು-ಕಾಣದ ತಾಣಗಳು

ಸೃಷ್ಟಿ ಏಕೆ?ಚರಾಚಾರಗಳೇಕೆ?
ಮೌನದಿ ಚೈತನ್ಯ ಸುಮ್ಮನಿರಲಿಲ್ಲ ಏಕೆ?
ಚೇತನದಗುಣ ಚೈತನ್ಯವೆ ಏಕೆ?
ಎಲ್ಲ ಪ್ರಶ್ನೆಗಳು ಪ್ರಶ್ನೆಗಳಾಗಿವೆ ಏಕೆ?

ತಿಳಿದವರು ತಿಳಿಸಲು ಕಷ್ಟ,
ತಿಳಿಯ ಬಯಸಿದಲ್ಲಿ ಅರಿಯಲು ಕಷ್ಟ
ತಿಳಿದ ಬರಿಯ - ಜ್ಞಾನ ಸಾಲದು
ತಿದ್ದಿ-ತೀಡುವ ಅನುಭವದಾಬಾವವೂ


Saturday, January 21, 2012


ಯಮುನಾ ನದಿಯ ತಟದಿ
ಕಾದಿಹಳು ರಾಧೆ,ತನ್ನ ಕೃಷ್ಣನಿಗಾಗಿ ||

ತನ್ನ ಕನಸಲಿ ತನಗೆ ಜಾಗ ಕೆಳಲು,
ಅವನ ಹೃದಯದಿ ಕೊಂಚ ಸ್ಥಾನ ಬೇಡಲು,
ಕಾದಿಹಳು ರಾಧೆ, ಯಮುನಾ ನದಿಯ ತಟದಿ ||

ನಗುವ ಕೊಂಡೋದ ನಂದನಿಗಾಗಿ
ತನ್ನ ನಗುವ ಮರಳಿ ಬೇಡಲಿಕಾಗಿ,
ಕಾದಿಹಳು ರಾಧೆ, ಯಮುನಾ ನದಿಯ ತಟದಿ ||

ಕಣ್ಣಿರನು ಕೊಂಡೋದ ಕೃಷ್ಣನಿಗಾಗಿ
ತನ್ನ ಅಂತರಂಗದ ಕಣ್ಣಾದವನಿಗಾಗಿ ,
ಕಾದಿಹಳು ರಾಧೆ, ಯಮುನಾ ನದಿಯ ತಟದಿ ||

ಕೃಷ್ಣನ ಪ್ರೀತಿಯ ಕಣ್ನಾಗಿ,
ಲೋಕಕೆ ನಿಜ ಪ್ರೀತಿಯ ಚಿನ್ೆಯಾಗಿ
ಕಾದಿಹಳು ರಾಧೆ, ಯಮುನಾ ನದಿಯ ತಟದಿ ||

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...