Posts

ದ್ವಂದ್ವ !

Image
ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ?
Don't trust anyone Do what you wanna do
Be Strong , Never let yourself down 
ಅನುಭವ ಹೇಳುವುದು ನಿನಗೋಸ್ಕರ ಬದುಕು ಧರ್ಮ ಹೇಳುವುದು, ಎಲ್ಲರಿಗಾಗಿ ಬದುಕು ಮೇಣದ ಬತ್ತಿಯಾಗಲ, ಖಡ್ಗವಾಗಲ? 
Love who loves you,  Ignore who hates you 
Be Strong, never let yourself down
ಆಸೆಯೇ ಇಲ್ಲದೆ ಬದುಕಲೇ,  ಸಂಸಾರಿ ಹೆಸರಲ್ಲಿ ನಾ ಸನ್ಯಾಸಿ ಆಗಲೇ?
Follow your dreams long as you live Dont hurt, never get hurt
Be Strong never let yourself down

ಧರ್ಮಸಂಕಟ !

Image
ಬುದ್ಧ ಬೌದ್ದನಲ್ಲ,
ಯೇಸು.,ಕ್ರೈಸ್ತನಲ್ಲ
ಹಣ್ಣಿನ ತಿರುಳ ಮರೆತು, ಸಿಪ್ಪೆ ಹಿಡಿದು
ನಾವೇ ದೊಡ್ಡವರು ಎನ್ನುತಿರುವ ಜನರ ಕಂಡು,
ಮತ್ತಿನ್ನೊಂದು ಧರ್ಮದ ಸೃಸ್ಟಿಗೆ
ಕಾರಣ ನಾವಾದೀವಿಯ ಎಂದು ಹೆದರಿರುವ
ಯೋಗಿಗಳು ಮತ್ತೆ ಹುಟ್ಟುವುದೋ
ಬೇಡವೋ ಎಂಬ ಚಿಂತೆಯಲ್ಲಿ ಚಡಪಡುತಿರುವರು||

ಹಾಗೆ ಸುಮ್ನೆ !

Image
ಪ್ರೀತಿಯ ಬೆನ್ನಟ್ತಿಹ ಹುಡುಗನಿಗೆ
ದಿನದ ಸಂಜೆ ಉಳಿದ್ದಿದ್ದು
ವಿರಹ ವೇದನೆ ಮಾತ್ರವಂತೆ !!
=====================================
ನೊಂದ ಹೆಂಡತಿಯ ನೋವು ಕೇಳುವರಾರು ಇರಲಿಲ್ಲ
ಜನ ಕೇಳಿದ್ದು ಮಾತ್ರ
ಹೆಂಡತಿಯರ ಮೇಲಿನ ಹಾಸ್ಯನದ ಚುಟುಕುಗಳನು ಮಾತ್ರ ||
===========================================
ಮದುವೆಯ ಮೊದಲು ಕ್ಷಣ ಕ್ಷಣವೂ ಹೊಗಳುತ್ತಿದ್ದ ಹುಡುಗ
ಮದುವೆಯ ನಂತರ ಹೇಳುವ
ಕ್ಷಮಿಸು ಬಿಡು ನನ್ನ ,ನಾ ಹೇಳಿದ್ದೆಲ್ಲ ಬರೀ ತಮಾಷೆಗೆ!
=======================================
ಕಳವಳದಿಂದ ಹಾರುತ್ತಿದ್ದ ಹೆಣ್ಣು ಕಾಗೆಯೂಸಹ
ಪುರುಸೊತ್ತಿಂದ ನಿಂತ ಗಾಡಿಯ ಕನ್ನಡಿಯಲ್ಲಿ
ತನ್ನ ಅಂದವ ನೋಡುತ್ತಾ ಮೈ ಮರೆತಿತ್ತು
ಎಸ್ಟೆ ಆಗಲಿ ಅದು ಹೆಣ್ಣಲ್ಲವೆ!
======================================
ವಯಸ್ಸು ಕಳೆದಂತೆ,
ಕನ್ನಡಿಯ ಮುಂದಿನ ಸಮಯ ಹೆಚ್ಚಾಗುತ್ತಿದೆ !!
ಅದರಲ್ಲಿ ತಪ್ಪೇನಿದೆ? ಆಸೆಯ ಹೊರತು?
====================================
21 ರ ಹೆಣ್ಣು ಮದುವೆ ಆದೊಡನೆ ಆಂಟೀ ಅಂತೇ
ಮದ್ವೆ ಆಗದ 40ರ ಮುದುಕ ಇನ್ನೂ ನವ ಯುವಕನೇ?
=================================
ಬಣ್ಣ ಕಳಚಿ, ಕನ್ನಡಿಯ ನೋಡಿ ಬೆಚ್ಚಿದ ನೀರೆ
ಚೇತರಿಸಿಕೊಂಡು ಮತ್ತೆ ನೋಡಿ ಹೇಳಿದಳಂತೆ
ಅರೇ ! ಇದು ನಾನೇ ಅಲ್ವಾ?
=================================
ಅಮಾವಾಸ್ಯೆಯ ಕತ್ತಲಲ್ಲಿ
ಬಾನಲ್ಲಿ ಹುಡುಕುತ್ತಿದ್ದ ಚಂದ್ರ
ಅವಳಿಗೆ ಭುವಿಯ ಮೇಲೇ ಕಾಣಿ…

ಈ ಹುಸಿ ಪ್ರಪಂಚದಲಿ....

Image
ಈ ಹುಸಿ ಪ್ರಪಂಚದಲಿ
ಹುಸಿ ನಗುವ ನಡುವೆ, ನಿಷ್ಕಲ್ಮಶ ವಾದ-
ನಗುವ ಕಳೆದು ಕೊಳ್ಳುವ ಭಯವಿದೆ ನನಗೆ  ||

ಈ ಹುಸಿ ಪ್ರಪಂಚದಲಿ
ಪ್ರೀತಿಗೆ ಬೆಲೆ ಕೊಡದ ಜನರನಡುವೆ
ಪ್ರೀತಿ ಇಂದ ದೂರಾಗುವ- ಭಯವಿದೆ ನನಗೆ ||

ಈ ಹುಸಿ ಪ್ರಪಂಚದಲಿ
ನಂಬಿಕೆ ದ್ರೋಹ ಮಾಡುವ ಜನರ ನಡುವೆ
ನಂಬಿಕೆಯ ಅರ್ಥ ಮರೆತೊಗುವ ಭಯವಿದೆ ನನಗೆ ||

ಈ ಹುಸಿ ಪ್ರಪಂಚದಲಿ
ವ್ಯವಹಾರಿಕ ಜೀವನದ ನಡುವೆ 
ಬಂಧ ಸಂಬಂಧಗಳು ವ್ಯವಹಾರಿಕವಾಗುವುದೆಂಬ ಭಯವಿದೆ ನನಗೆ ||
Image
ಓಡುತಿರುವುದು ಜಗವು,ಓಡುತಿರುವುದು
ಯಾರಿಗೂ ಸಿಗದಂತೆ,ಎಂದಿಗೂ ನಿಲದಂತೆ
ತನ್ನಷ್ಟಕ್ಕೆ ತಾ ತಿರು ತಿರುಗಿ

ಓಡುತಿರುವುದು ಜಗವು,ಓಡುತಿರುವುದು

ಯಾರಿಗೂ ಕಾಯದೇ,ಯಾರನು ಬಿಡದೆ
ಯಾರನು ಲೆಕ್ಕಿಸದೆ,ಎಲ್ಲರನೂ ತನ್ನ ಸೆರಗಲಿ ಹಿಡಿದು
ಹೊಗಲಿದರು ಕೇಳದೆ, ತೆಗಲಿದರು ನೋಡದೆ

ಓಡುತಿರುವುದು ಜಗವು,ಓಡುತಿರುವುದು

ನಾಳೆಯನು ಇಂದಿಗೆ ಕರೆಯುತ,ಈ ದಿನವ ನೆನಪಿಗೆ ತಳ್ಳುತ,
ಕರುಣೆಯ ಅರ್ಥವ ಅರಿಯದೆ,
ತನ್ನ ಕೆಲಸಕೆ ಹೊ೦ಚ ಹೂಡುತ 

ಓಡುತಿರುವುದು ಜಗವು,ಓಡುತಿರುವುದು
*** ನಿನ್ನ ನೆನಪು ***

Image
ಕಾರಣವ ಅರಿಯದೆ ಸುಮ್ಮನೇ- ನಿಂದಿಸುವೆ ಏಕೆ ನನ್ನನೇ ಅರಿಯದೆ ಹೊದೆಯೆ ಮನಸಿನ ಬಾವನೆ
ಊರಿಗೆ ಬಂದಾಕೆ ನೀರಿಗೆ ಬಾರದೇ ಇರುವಳೇ ತುಮುಲವೇಕೆ ಅಷ್ಟು, ಬರುವೆ ನಿನಗಾಗೆ ಕಾಯಬಾರದೇ ಕೊಂಚ ನೀ
ಕನಸಕಟ್ಟಿ, ಬೆಟ್ಟದಂತೆ ಹೊತ್ತು ಆಸೆ ಹೊರಟಿರುವೆ ನಾ, ನನ್ನವಳೇ- ಕೊಂಚ ತಾಳು, ನನಗು ನಿನ್ನ ನೆನಪೇ

*****ಕಾಲ*****

Image
ಕಾಲ ಕಾಲದಲಿ ಅಡಗಿ ಹೋಗಿದೆ ಕಾಲಾಂತರಂಗದ ವಿಷಯಗಳು ಕಾಡಿ-ಬೇಡಿದರು ತಿಳಿಯದು ಸುಲಭದಿ ಕಂಡು-ಕಾಣದ ತಾಣಗಳು
ಸೃಷ್ಟಿ ಏಕೆ?ಚರಾಚಾರಗಳೇಕೆ? ಮೌನದಿ ಚೈತನ್ಯ ಸುಮ್ಮನಿರಲಿಲ್ಲ ಏಕೆ? ಚೇತನದಗುಣ ಚೈತನ್ಯವೆ ಏಕೆ? ಎಲ್ಲ ಪ್ರಶ್ನೆಗಳು ಪ್ರಶ್ನೆಗಳಾಗಿವೆ ಏಕೆ?
ತಿಳಿದವರು ತಿಳಿಸಲು ಕಷ್ಟ, ತಿಳಿಯ ಬಯಸಿದಲ್ಲಿ ಅರಿಯಲು ಕಷ್ಟ ತಿಳಿದ ಬರಿಯ - ಜ್ಞಾನ ಸಾಲದು ತಿದ್ದಿ-ತೀಡುವ ಅನುಭವದಾಬಾವವೂ