ಈ ಹುಸಿ ಪ್ರಪಂಚದಲಿ....

ಈ ಹುಸಿ ಪ್ರಪಂಚದಲಿ
ಹುಸಿ ನಗುವ ನಡುವೆ, ನಿಷ್ಕಲ್ಮಶ ವಾದ-
ನಗುವ ಕಳೆದು ಕೊಳ್ಳುವ ಭಯವಿದೆ ನನಗೆ  ||

ಈ ಹುಸಿ ಪ್ರಪಂಚದಲಿ
ಪ್ರೀತಿಗೆ ಬೆಲೆ ಕೊಡದ ಜನರನಡುವೆ
ಪ್ರೀತಿ ಇಂದ ದೂರಾಗುವ- ಭಯವಿದೆ ನನಗೆ ||

ಈ ಹುಸಿ ಪ್ರಪಂಚದಲಿ
ನಂಬಿಕೆ ದ್ರೋಹ ಮಾಡುವ ಜನರ ನಡುವೆ
ನಂಬಿಕೆಯ ಅರ್ಥ ಮರೆತೊಗುವ ಭಯವಿದೆ ನನಗೆ ||

                                                                
ಈ ಹುಸಿ ಪ್ರಪಂಚದಲಿ
ವ್ಯವಹಾರಿಕ ಜೀವನದ ನಡುವೆ 

ಬಂಧ ಸಂಬಂಧಗಳು ವ್ಯವಹಾರಿಕವಾಗುವುದೆಂಬ ಭಯವಿದೆ ನನಗೆ ||

Comments

Popular posts from this blog

Munjaneya sobagige!!

ದ್ವಂದ್ವ !

Words ForEver...