ಸದ್ ಭಾವನೆಗಳು ತರುವವು
ಮನಕ್ಕೆ ಸೌಂದರ್ಯ |
ಪಶು ಪಕ್ಷಿಗಳು ತರುವವು
ಪ್ರಕೃತಿಗೆ ಸೌಂದರ್ಯ||
ನಗು,ಲಜ್ಜೆ ಮುಗ್ದತೆ
ಹೆಣ್ಣಿನ ಸೌಂದರ್ಯ|
ನಗು,ಅಳು,ತುಂಟತೆ,ಹಠ
ಮಗುವಿನ ಸೌಂದರ್ಯ ||
ಜಪ - ತಪ ,ದ್ಯನ,ಚಿಂತನೆ
ಮುನಿಯ ಸೌಂದರ್ಯ|
ಜ್ಞಾನದಾಹ,ಜಾಗೃತಿ,ಜಯ
ವಿದ್ಯಾರ್ಥಿಯ ಸೌಂದರ್ಯ ||
ಪ್ವಹೃಶ ,ಪರಾಕ್ರಮ,ತೀಕ್ಷ್ಣತೆ
ಗಂಡಿಗೆ ಸೌಂದರ್ಯ|
ಜಗಳ,ಪ್ರೇಮ, ಕರುಣೆ
ದಂಪತಿಗಳ ಸೌಂದರ್ಯ||
ಸೌಂದರ್ಯದ ಅರ್ಥಗರ್ಭವ
ಬೇಧಿಸಿದ ಗುರುವಿಗೆ|
ಸೌಂದರ್ಯ ಭರಿತ ಜ್ಞಾನದ
ಪುಷ್ಪದಾರ್ಪಣೆ || ಗುರುವಿನ ಚರಣಕಾರ್ಪಣೆ||
its very good excellent.
ReplyDeletethnk you very much subbu.. :)
ReplyDelete