ತವರ ಬಂಧನವ ತೊರೆದು ,
ತಾಯ ಮಮತೆಯ ತ್ಯಜಿಸಿ,
ತಂದೆ ಒಲವ ಮರೆತು
ಬರುವೆ ನಾ ನಿನ್ನ ಹರಸಿ || ನಾ ನಿನ್ನ ಹರಸಿ ||
ನಿನ್ನ ಪ್ರೀತಿಯ ಬಯಸಿ,
ನಿನ್ನ ನಗುವ ಸಿರಿಯ ಹಂಬಲಿಸಿ,
ತೊರೆಯಲಾಗದ ಬಂದನವ ತೊರೆದು-
ಬರುವೆ ನಾ ನಿನ್ನ ಹರಸಿ || ನಾ ನಿನ್ನ ಹರಸಿ ||
ಬೆಟ್ಟದೆತ್ತರ ಕನಸ ಹೊತ್ತು,
ಪುಟ್ಟ ಮನದಿ ನಿನ್ನೆ ತುಂಬಿ,
ಲಜ್ಜೆಯೊಡನೆ ಕೊಂಚ ಭಯದಿ
ಬರುವೆ ನಾ ನಿನ್ನ ಹರಸಿ || ನಾ ನಿನ್ನ ಹರಸಿ ||
ಅಕ್ಕ - ಅಣ್ಣ ,ತಮ್ಮ - ತಂಗಿಯೆಂಬ
ಬಂಧು ಬಾಂದವ್ಯವಾ ಕಳಚಿ
ತಿಳಿದು ನೀನೆ ಎಲ್ಲವೆಂದು
ಬರುವೆ ನಾ ನಿನ್ನ ಹರಸಿ|| ನಾ ನಿನ್ನ ಹರಸಿ ||
ಅಮ್ಮ !! ಹೇಗೆ ಹೋಗಲೇ ನಾ !!
ಒಬ್ಬಳೇ ನನ್ನವರಲ್ಲದ ನನ್ನ ಮನೆಗೆ ||
ಹೇಗೆ ಒಪ್ಪುವರೆ ನನ್ನ
ನನ್ನವರು ನನ್ನ ಮನೆಯವರು ?!!
ಎದೆ ಬಿರಿಯುತಿದೆ,ನಿನ ಬಿಟ್ಟೋಗಲು
ಹೃದಯ ಅಳುತಲಿದೆ,ನಿನ ತೊರೆಯಲೂ
ಆದರೂ ಮನ ಹರಸಿದೆ ನನ್ನವನ
ಹೊರಡುವೆ ನಾ ಅವನ ಹರಸಿ || ನಾ ಅವನ ಹರಸಿ ||
ಹರಸೆ ಅಮ್ಮ ! ನಾ ಹೊರಟೆ ನನ ಮನೆಗೆ,
ಹಾಲುಂಡಿದ ಈ ತವರು ನಗುತಲಿರಲಿ ಅನುಕ್ಷಣವೂ
ಋಣತೀರಿತೇ ನಿನ ಕೈ ತುತ್ತಿನದು!!
ಹೊರಡುವೆ ನಾ - ನಿಂದು ಅವನ ಹರಸಿ || ನಾ ಅವನ ಹರಸಿ ||
Shouldn't it be "arasi"? harasu andre "aasheervadisu" antha alva?
ReplyDeleteyah kiran thanks for correction.. gamanise irlilla nodi..!! gonna correct it !!
ReplyDelete