Wednesday, January 19, 2011

~~~~~~~~~Sometimes~~~~~~~~~~

Sometimes i feel so..
I am all alone in this world
Sometimes i think so..
Whole world will come to rescue..

Sometimes i tell myself
To begin the war and be an achiver
Sometimes i get scared
That i am one man army

Sometimes i dream so..
I am in the wonderlane
With a magic stick in my hand
And only Happiness talks in my kingdom

Sometimes reality strikes
And screams, calls me back
Makes me to hide my dreams
Teaches me the limit of the dreams

Thursday, December 2, 2010

~~~~ಹಕ್ಕಿ~~~~

ಯಾರಿಗೂ ಸಿಗದ ಹಕ್ಕಿ
ಯಾರನು ಲೆಕ್ಕಿಸದ ಹಕ್ಕಿ ||
ಕಂಡವರೆಲ್ಲ ಕನಸು ಕಾಣುವ ಹಕ್ಕಿ
ನನ್ನದಾಗ ಬೇಕು ಎಂದು ಬಯಸುವ ಹಕ್ಕಿ||

ಬಂಧನ ಒಲ್ಲದ ಹಕ್ಕಿ
ಎಲ್ಲರ ಬಂಧಿಸುವ ಹಕ್ಕಿ||
ನಗಿಸುವ ಹಕ್ಕಿ
ಜೊತೆಗೆ ನಲಿಯದ ಹಕ್ಕಿ||

ನೋವನು ಕೇಳದ ಹಕ್ಕಿ
ನಗುವಿಗೆ ಮರೆಯದ ಹಕ್ಕಿ||
ತಾನು ತನದೆನ್ನುವ ಹಕ್ಕಿ
ಮಮತೆಗೆ ಬೆಲೆ ಇಲ್ಲದ ಹಕ್ಕಿ||


Monday, September 13, 2010

~~ನಾನೆಂದರೆ ಅವನಿಗೆ ಬಲು ಇಷ್ಟ~~

ನಾನೆಂದರೆ ಅವನಿಗೆ ಬಲು ಇಷ್ಟ
ಬೇಡ ಎಂದರು ಬಿಡದೆ,ಬೆಂಬಿಡಡೇ ಕಾಡುವ||

ಕತ್ತಲಲ್ಲಿ ನಾ ಕಳೆದಾಗ
ಎಲ್ಲ ಅಗಲಿ ಹೋದಾಗ
ಬಂದು ನಿಲ್ಲುವ,ನನ್ನ ಬಳಿ
ನಿಂತು ನಗುವನು..!!

ನಗುತ ಸಾವಿರ ವಿಷಯ ನುಡಿವನು
ಯಾರಿಗೂ ಕೇಳದು ,ಯಾರಿಗೂ ಕಾಣನು
ಹೇಗೋ!! ಎಲ್ಲೋ ಅಡಗಿ
ನಿಂತು ನಗುವನು...!!

ನನಗೆ ಯಾರಿಲ್ಲ ಎಂದು ಕೂತೋಡೇ
ಬರುವನವನು,ಅಪ್ಪಿ ನನ್ನ
ಹಳೆಯ ನೆನಪುಗಳ ಬುತ್ತಿ ಬಿಚ್ಚಿ
ನಿಂತು ನಗುವನು...!!

ಏನು ಮಾಡುವುದೋ ತಿಳಿಯದು
ಅದೆಲ್ಲಿ ಹೋಗುವುದೋ ಅರಿಯದು
ಮನವು ಮೌನವು,ಇವನು ಮಾತ್ರ ನನ್ನ ಕಂಡು
ನಿಂತು ನಗುವನು..!!

ಒಂಟಿತನ ಅವನ ಹೆಸರು
ಬಲು ತ್ರಾಸ ಕೊಡುವನು
ಆಗಾಗ ಬಳಿ ಬಂದು, ನನ್ನ ಸ್ಥಿತಿ ನೋಡಿ ಅವನು
ನಿಂತು ನಗುವನು,ನಗುತ ನನ್ನ ಕೊಲ್ಲುವ!!

Tuesday, July 20, 2010

ನೀ ಒಮ್ಮೆ ಹೇಳೋ ಸಖ..!!

ನೀ ಒಮ್ಮೆ ಹೇಳೋ ಸಖ...
ನೀ ನನ್ನವಳೆಂದು ....
ಕ್ಷಣ ಕ್ಷಣವು ಕಾದಿಹೆನು
ನಿನ್ನ ಆ ನುಡಿಗೆ ||

ಈ ನನ್ನ ಹೃದಯ ಸದಾ
ಕಾಡಿದೆ ಬಲು ದಿನದಿಂದ
ನನ್ನ ಕವಿತೆಗೆ ಪದವಾಗು
ಕನಸಿಗೆ ಕಣ್ನಾಗು ಬಾ ||

~!!~...ಮರೆಯಬೇಕು ನಾ ನಿನ್ನ....~!!~


ಮರೆಯ ಬೇಕು ನಾ ನಿನ್ನ
ಆ ನಿನ್ನ ನೆನಪುಗಳನೆಲ್ಲ ಮರೆಯ ಬೇಕು ||
ಮತ್ತೆ ನಿನ್ನ ನೆನಪ ಬಯಸಿ ಹುಡುಕಿದರು
ಸಿಗದಂತೆ ಮರೆಯಬೇಕು ನಾ ನಿನ್ನ ||

ಪದ ಬರೆಯಲು ಕೂತಾಗ
ನೆನಪಲ್ಲಿ ತೇಲುವ ನಿನ ಮೊಗವ||
ನೊಂದು ನಾ ಕೂತಾಗ ಬಂದು ನೀ
ನುಡಿದ ಮಾತುಗಳನೆಲ್ಲ ಮರೆಯ ಬೇಕು ನಾ||

ನಾ ನೀ.. ಕೂತು ಕಟ್ಟಿಹ
ಕನಸುಗಳನೆಲ್ಲ... ಆ ನಮ್ಮ ಆಸೆಗಳೆಲ್ಲ
ಮರೆಯಲಾಗದೆ ಕಾಡಿದರು...
ನಾನಿಂದು ಮರೆಯಲೇ ಬೇಕು ||

Tuesday, May 18, 2010


Give me strength
To make life better
To change the things around
To fill the strength in the weaken hearts

Give me Strength
To feed the needy stomach
To wipe the tears of the poor
To spread love around





Monday, May 17, 2010

ದೋಣಿ ಪಯನ.......!!

ದೋಣಿ ಪಯನವು ಜೀವನ-ಚಕ್ರವು
ನಡೆಯುವುದು ಜೊತೆ ಪಯಣಿಗರೊಡನೆ|
ಸ್ಥಳವು ಬಂದೊಡೆ ಇಳಿದು ಹೋಗುವೆವು
ಯಾರಿಗೂ ಹೇಳ ಕೇಳದೆ ||

ಇಳಿದು ಮತ್ತಿನೊಂದು ದೋಣಿಗೋ
ಮನೆಯೂ ದೊರಕಿತೋ ನಂದನ||
ದೋಣಿಯೊಳಗಿನ ಸ್ನೇಹ - ಪ್ರೇಮವೂ
ಮರೆಯಗುವುದೆನ್ ಇಳಿಡೊದೆ||

ಸಕಲ ಜೀವ ರಾಶಿಗಳಿಗೂ
ದೈವವಿತ್ತ ವಿರಮವೂ||
ಪುರ್ನವಿರಮ ಕೊಡುವನವನು
ಅವನ ಅರಿತರೆ ಪೂರ್ಣದಿ ||

ಅರಿವಿತ್ತ ಗುರುಚರಣಕ್ಕಿದೋ ಈ
ಕವನದ ಮಾಲೆಯು
ಕಲ್ಪನೆಯು ತಂದ ತಾಯ ಚರಣಕ್ಕಿದೋ
ಕವನದ ಅರ್ಪಣೆ||


ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...