ಯಾರಿಗೂ ಸಿಗದ ಹಕ್ಕಿ
ಯಾರನು ಲೆಕ್ಕಿಸದ ಹಕ್ಕಿ ||
ಕಂಡವರೆಲ್ಲ ಕನಸು ಕಾಣುವ ಹಕ್ಕಿ
ನನ್ನದಾಗ ಬೇಕು ಎಂದು ಬಯಸುವ ಹಕ್ಕಿ||
ಬಂಧನ ಒಲ್ಲದ ಹಕ್ಕಿ
ಎಲ್ಲರ ಬಂಧಿಸುವ ಹಕ್ಕಿ||
ನಗಿಸುವ ಹಕ್ಕಿ
ಜೊತೆಗೆ ನಲಿಯದ ಹಕ್ಕಿ||
ನೋವನು ಕೇಳದ ಹಕ್ಕಿ
ನಗುವಿಗೆ ಮರೆಯದ ಹಕ್ಕಿ||
ತಾನು ತನದೆನ್ನುವ ಹಕ್ಕಿ
ಮಮತೆಗೆ ಬೆಲೆ ಇಲ್ಲದ ಹಕ್ಕಿ||
No comments:
Post a Comment