Wednesday, December 16, 2009

ಭಾವ ಚಿಲುಮೆ...

Every one will be having talent in one or the other way... It is waiting for us to call...
Lets welcome the beautiful talent which is hidden in us...


ಮನದ ಮರೆಯಲಿ ಕುಳಿತಿರುವ,
ಭವ್ಯ ಜ್ಞಾನ ಜ್ಯೋತೀಯೆ,
ನಿರಂತರ ಆನಂದ ಚಿಮ್ಮುವ
ಚಿಲುಮೆಯಾಗಿ ಪುಟಿದು ಬಾ||

ಸುತ್ತ ಅಂದಕಾರಮಯದ
ಮನದಲಿ,ಕೆಟ್ಟ ರಾಗ-
ದ್ವೇಷದೊಡನೆ ಸೆಣಸಿ
ಸೆರೆಯನು ಮುರಿದು ಬಾ||

ಚಂಚಲತೆಯ ಪಾಶದಿಂದ
ಕಾಮನೆಯೆಂಬ ಕೈ ಕೋಳಗಳಿಂದ
ಅಂಜಿಕೆಯ ಅಳುಕನು
ತೊರೆಯೆ ಬಾ||

ಕೊಳೆಯುತಿಹ ಸತ್ವತೆಯ
ಮೊಳೆವಂತೆ ಮಾಡಲು
ಸಡಗರ ಸಂಬ್ರಮದಿಂದ
ಜಿಗಿ ಜಿಗಿದು ಬಾ||

ನಿನ್ನ ಬರುವಿಕೆಯ ರಭಸಕೆ
ಛಲ,ಸ್ಪೂರ್ತಿಗಳು ಒಂದಾಗಿ,
ಜ್ಞಾನ ಬೆಳಕಾಗಿ,ನೀತಿ ನಿಜವಾಗಿ
ಪುಟಿದು ಬರುವಂತೆ ಬಾ||

ಚಂಚಾಲತೆಯ ನಡುವಿನಲಿ,
ರಾಗ ದ್ವೇಷಗಳೊಡನೆ ಸೆಣಸಿ
ಕಾಮ,ಮವ್ಡ್ಯದ ಮನದಿ,
ಕಾಯುತಿರುವೆನು ಎದು ಬಾ||

2 comments:

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...