Tuesday, July 20, 2010

ನೀ ಒಮ್ಮೆ ಹೇಳೋ ಸಖ..!!

ನೀ ಒಮ್ಮೆ ಹೇಳೋ ಸಖ...
ನೀ ನನ್ನವಳೆಂದು ....
ಕ್ಷಣ ಕ್ಷಣವು ಕಾದಿಹೆನು
ನಿನ್ನ ಆ ನುಡಿಗೆ ||

ಈ ನನ್ನ ಹೃದಯ ಸದಾ
ಕಾಡಿದೆ ಬಲು ದಿನದಿಂದ
ನನ್ನ ಕವಿತೆಗೆ ಪದವಾಗು
ಕನಸಿಗೆ ಕಣ್ನಾಗು ಬಾ ||

~!!~...ಮರೆಯಬೇಕು ನಾ ನಿನ್ನ....~!!~


ಮರೆಯ ಬೇಕು ನಾ ನಿನ್ನ
ಆ ನಿನ್ನ ನೆನಪುಗಳನೆಲ್ಲ ಮರೆಯ ಬೇಕು ||
ಮತ್ತೆ ನಿನ್ನ ನೆನಪ ಬಯಸಿ ಹುಡುಕಿದರು
ಸಿಗದಂತೆ ಮರೆಯಬೇಕು ನಾ ನಿನ್ನ ||

ಪದ ಬರೆಯಲು ಕೂತಾಗ
ನೆನಪಲ್ಲಿ ತೇಲುವ ನಿನ ಮೊಗವ||
ನೊಂದು ನಾ ಕೂತಾಗ ಬಂದು ನೀ
ನುಡಿದ ಮಾತುಗಳನೆಲ್ಲ ಮರೆಯ ಬೇಕು ನಾ||

ನಾ ನೀ.. ಕೂತು ಕಟ್ಟಿಹ
ಕನಸುಗಳನೆಲ್ಲ... ಆ ನಮ್ಮ ಆಸೆಗಳೆಲ್ಲ
ಮರೆಯಲಾಗದೆ ಕಾಡಿದರು...
ನಾನಿಂದು ಮರೆಯಲೇ ಬೇಕು ||

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...