Monday, September 29, 2014

ಧರ್ಮಸಂಕಟ !

ಬುದ್ಧ ಬೌದ್ದನಲ್ಲ,
ಯೇಸು.,ಕ್ರೈಸ್ತನಲ್ಲ
ಹಣ್ಣಿನ ತಿರುಳ ಮರೆತು, ಸಿಪ್ಪೆ ಹಿಡಿದು
ನಾವೇ ದೊಡ್ಡವರು ಎನ್ನುತಿರುವ ಜನರ ಕಂಡು,
ಮತ್ತಿನ್ನೊಂದು ಧರ್ಮದ ಸೃಸ್ಟಿಗೆ
ಕಾರಣ ನಾವಾದೀವಿಯ ಎಂದು ಹೆದರಿರುವ
ಯೋಗಿಗಳು ಮತ್ತೆ ಹುಟ್ಟುವುದೋ
ಬೇಡವೋ ಎಂಬ ಚಿಂತೆಯಲ್ಲಿ ಚಡಪಡುತಿರುವರು|| 

Tuesday, March 4, 2014

ಹಾಗೆ ಸುಮ್ನೆ !

ಪ್ರೀತಿಯ ಬೆನ್ನಟ್ತಿಹ ಹುಡುಗನಿಗೆ
ದಿನದ ಸಂಜೆ ಉಳಿದ್ದಿದ್ದು
ವಿರಹ ವೇದನೆ ಮಾತ್ರವಂತೆ !!
=====================================
ನೊಂದ ಹೆಂಡತಿಯ ನೋವು ಕೇಳುವರಾರು ಇರಲಿಲ್ಲ
ಜನ ಕೇಳಿದ್ದು ಮಾತ್ರ
ಹೆಂಡತಿಯರ ಮೇಲಿನ ಹಾಸ್ಯನದ ಚುಟುಕುಗಳನು ಮಾತ್ರ ||
===========================================
ಮದುವೆಯ ಮೊದಲು ಕ್ಷಣ ಕ್ಷಣವೂ ಹೊಗಳುತ್ತಿದ್ದ ಹುಡುಗ
ಮದುವೆಯ ನಂತರ ಹೇಳುವ
ಕ್ಷಮಿಸು ಬಿಡು ನನ್ನ ,ನಾ ಹೇಳಿದ್ದೆಲ್ಲ ಬರೀ ತಮಾಷೆಗೆ!
=======================================
ಕಳವಳದಿಂದ ಹಾರುತ್ತಿದ್ದ ಹೆಣ್ಣು ಕಾಗೆಯೂಸಹ
ಪುರುಸೊತ್ತಿಂದ ನಿಂತ ಗಾಡಿಯ ಕನ್ನಡಿಯಲ್ಲಿ
ತನ್ನ ಅಂದವ ನೋಡುತ್ತಾ ಮೈ ಮರೆತಿತ್ತು
ಎಸ್ಟೆ ಆಗಲಿ ಅದು ಹೆಣ್ಣಲ್ಲವೆ!
======================================
ವಯಸ್ಸು ಕಳೆದಂತೆ,
ಕನ್ನಡಿಯ ಮುಂದಿನ ಸಮಯ ಹೆಚ್ಚಾಗುತ್ತಿದೆ !!
ಅದರಲ್ಲಿ ತಪ್ಪೇನಿದೆ? ಆಸೆಯ ಹೊರತು?
====================================
21 ರ ಹೆಣ್ಣು ಮದುವೆ ಆದೊಡನೆ ಆಂಟೀ ಅಂತೇ
ಮದ್ವೆ ಆಗದ 40ರ ಮುದುಕ ಇನ್ನೂ ನವ ಯುವಕನೇ?
=================================
ಬಣ್ಣ ಕಳಚಿ, ಕನ್ನಡಿಯ ನೋಡಿ ಬೆಚ್ಚಿದ ನೀರೆ
ಚೇತರಿಸಿಕೊಂಡು ಮತ್ತೆ ನೋಡಿ ಹೇಳಿದಳಂತೆ
ಅರೇ ! ಇದು ನಾನೇ ಅಲ್ವಾ?
=================================
ಅಮಾವಾಸ್ಯೆಯ ಕತ್ತಲಲ್ಲಿ
ಬಾನಲ್ಲಿ ಹುಡುಕುತ್ತಿದ್ದ ಚಂದ್ರ
ಅವಳಿಗೆ ಭುವಿಯ ಮೇಲೇ ಕಾಣಿಸಿಬಿಟ್ಟನಂತೆ!!
========================================
ಅಮಾವಾಸ್ಯೆಯ ಕತ್ತಲಲ್ಲಿ,
ಚಂದ್ರನ ಹುಡುಕುವ ಹೆಣ್ಣಿಗೆ
ಯಾರಾದರೂ ತಿಳಿಹೇಳಿ ಅವನು ಬಾರನೆಂದು!
======================================
ಚಂದಿರನ ತಂದು ಮುಂದಿದುವೆ ಅಂದಾಗಲೂ
ನಂಬಿದೆ ನಾ ಅವನ ಮಾತು,
ಪ್ರಪಂಚದಲ್ಲಿ ನೀನೇ ಸುಂದರ ಎಂದಾಗಲೂ,
ನಂಬಿದೆ ನಾ ಅವನ ಮಾತು

ಯಾಕೆ? ಎಂಬ ಪ್ರಶ್ನೆಗೆ ಉತ್ತರ ನನ್ನಲಿಲ್ಲ,
ಸುಳ್ಳಲ್ಲೂ ಸಿಹಿ ಇದೆ ಅದು ಮಾತ್ರಬಲ್ಲೇ ನಾ,
ಬುದ್ದಿ ನಗುತ್ತಿದ್ದರು ಅವನ ಮಾತಿಗೆ,
ಹೃದಯ ಶರಣಾಗುತ್ತಿದೆ ಅವನ ಪ್ರೀತಿಗೆ

ದ್ವಂದ್ವ !

ಸತ್ಯ ಯಾವುದು, ಸುಳ್ಳುಯಾವುದು  ನಾನು ಕಂಡಿದ್ದ, ಕೇಳಿದ್ದ? ನನಗೆ ಸರಿ ಅನಿಸಿದ್ದ? Don't trust anyone Do what you wanna do Be Str...