ನನ್ನದೊಂದು ಪುಟ್ಟ ಮನೆ,
ಹಸಿರು ಸುತ್ತಿ ಇರಬೇಕು ಅದ,
ಪಕ್ಕ ನೀರಿನ ಝರಿ ಸದ್ದು
ನನ್ನದೊಂದು ಪುಟ್ಟ ಮನೆ,
ನೆನಪುಗಳು ತುಂಬಿರಬೇಕು ಅಲ್ಲಿ
ಸದಾ ನಗು-ನಲಿವು ಜೊತೆಯಾಗಿರಬೇಕು
ನನ್ನದೊಂದು ಪುಟ್ಟ ಮನೆ,
ಅಂಗಳದಲ್ಲಿ ಸದಾ ಮಕ್ಕಳ ಹಾಡು
ಜಗುಲಿಯ ಮೇಲೆ ದೊಡ್ಡವರ ಮಾತು
ನನ್ನದೊಂದು ಪುಟ್ಟ ಮನೆ,
ನೋಡಿದ ಕ್ಷಣವೇ ಮನ ಶಾಂತಿಯಲಿ ತುಂಬುವಂತೆ
ಬದುಕಿನರ್ಥವ ಹೇಳುವಂತೆ
ನನ್ನದೊಂದು ಪುಟ್ಟ ಮನೆ,
ಹಳೆಯ ಜೀವನದ ಸವಿಯ ತೋರುವಂತೆ
ಅದುನಿಕತೆಯ ಸೊಗಡು ಇಲ್ಲದಂತೆ...
ನನ್ನದೊಂದು ಪುಟ್ಟ ಮನೆ,
ಯಾರ ಹಂಗಿಲ್ಲದೇ,ಯಾವ ಚಿಂತೆ ಇಲ್ಲದೇ
ಕಲ್ಮಶದ ಮನವಿಲ್ಲದ ಜನರೊಂದಿಗೆ||