ನಾನೆಂದರೆ ಅವನಿಗೆ ಬಲು ಇಷ್ಟ
ಬೇಡ ಎಂದರು ಬಿಡದೆ,ಬೆಂಬಿಡಡೇ ಕಾಡುವ||
ಕತ್ತಲಲ್ಲಿ ನಾ ಕಳೆದಾಗ
ಎಲ್ಲ ಅಗಲಿ ಹೋದಾಗ
ಬಂದು ನಿಲ್ಲುವ,ನನ್ನ ಬಳಿ
ನಿಂತು ನಗುವನು..!!
ನಗುತ ಸಾವಿರ ವಿಷಯ ನುಡಿವನು
ಯಾರಿಗೂ ಕೇಳದು ,ಯಾರಿಗೂ ಕಾಣನು
ಹೇಗೋ!! ಎಲ್ಲೋ ಅಡಗಿ
ನಿಂತು ನಗುವನು...!!
ನನಗೆ ಯಾರಿಲ್ಲ ಎಂದು ಕೂತೋಡೇ
ಬರುವನವನು,ಅಪ್ಪಿ ನನ್ನ
ಹಳೆಯ ನೆನಪುಗಳ ಬುತ್ತಿ ಬಿಚ್ಚಿ
ನಿಂತು ನಗುವನು...!!
ಏನು ಮಾಡುವುದೋ ತಿಳಿಯದು
ಅದೆಲ್ಲಿ ಹೋಗುವುದೋ ಅರಿಯದು
ಮನವು ಮೌನವು,ಇವನು ಮಾತ್ರ ನನ್ನ ಕಂಡು
ನಿಂತು ನಗುವನು..!!
ಒಂಟಿತನ ಅವನ ಹೆಸರು
ಬಲು ತ್ರಾಸ ಕೊಡುವನು
ಆಗಾಗ ಬಳಿ ಬಂದು, ನನ್ನ ಸ್ಥಿತಿ ನೋಡಿ ಅವನು
ನಿಂತು ನಗುವನು,ನಗುತ ನನ್ನ ಕೊಲ್ಲುವ!!